ಚಿಯಾ ಬೀಜ ಸೇವನೆ ಮಾಡುವಿರಾ? ಎಚ್ಚರ! ಸರಿಯಾದ ಸೇವನೆ ಕ್ರಮ ತಿಳಿದು ಉಪಯೋಗಿಸಿ | Chia Seeds In Kannada

Chia Seeds Benefits In Kannada: ಇತ್ತೀಚಿನ ವರ್ಷಗಳಲ್ಲಿ ಜನರು ಆರೋಗ್ಯಕರ ಆಹಾರಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ. ಆರೋಗ್ಯಕರ ಆಹಾರಗಳ ಬಗ್ಗೆ ತಿಳಿಯಲು ಹೆಚ್ಚು ಹೆಚ್ಚು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಇಂತಹ ಆರೋಗ್ಯಕರ ಆಹಾರಗಳ ಹೆಸರು ಬಂದಾಗ, ಅವುಗಳ ಬಗ್ಗೆ ನಾವು ಮಾತನಾಡುವಾಗ ಅಲ್ಲಿ ಚಿಯಾ ಬೀಜಗಳ ಹೆಸರು ಖಂಡಿತವಾಗಿ ಬಂದೇ ಬರುತ್ತದೆ. ಚಿಯಾ ಸೀಡ್ಸ್ ಆರೋಗ್ಯಕರವಾಗಿದ್ದು, ಇದು ದೇಹದ ತೂಕ ನಷ್ಟಕ್ಕೆ ಜನಪ್ರಿಯವಾದ ಆಹಾರವಾಗಿದೆ. ಅಲ್ಲದೇ ಇದನ್ನು ವಿವಿಧ ತೂಕ ನಷ್ಟ ಪಾನೀಯಗಳು ಮತ್ತು ಸ್ಮೂಥಿಗಳು ಹಾಗೂ ಸಲಾಡ್‌ ಇತ್ಯಾದಿಗಳಲ್ಲಿ ಬೆರೆಸಲಾಗುತ್ತದೆ. ಚಿಯಾ ಬೀಜಗಳನ್ನು ಕನ್ನಡದಲ್ಲಿ ಕಾಮಕಸ್ತೂರಿ ಬೀಜ ( Chia Seeds in Kannada ) ಹಾಗೂ  ಹಿಂದಿಯಲ್ಲಿ ಸಬ್ಜಾ ಎಂದು ಕರೆಯಲಾಗುತ್ತದೆ. ಚಿಯಾ ಬೀಜಗಳಲ್ಲಿ ಅನೇಕ ಉತ್ತಮ ಗುಣಗಳಿದ್ದು, ದೇಹದ ತೂಕವನ್ನು ಕಡಿಮೆ ಮಾಡಲು ಚಿಯಾ ಬೀಜಗಳನ್ನು ಸಹಾ ಕೆಲವರು ಸೇವನೆ ಮಾಡುತ್ತಾರೆ.

Chia seeds in kannada

ಚಿಯಾ ಬೀಜಗಳು ಉತ್ಕರ್ಷಣ ನಿರೋಧಕಗಳಿಂದ ಬಹು ಸಮೃದ್ಧವಾಗಿವ. ಇದು ಶರೀರದಲ್ಲಿ ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಋಣಾತ್ಮಕ ಪರಿಣಾಮಗಳಿಂದ ದೇಹವನ್ನು ರಕ್ಷಿಸಲು ಬಹಳ ಉಪಯುಕ್ತವಾಗಿದೆ. ಚಿಯಾ ಬೀಜಗಳು ಹೊಟ್ಟೆಯ ಆರೋಗ್ಯವನ್ನು ಸಹಾ ಕಾಪಾಡುತ್ತದೆ. ಈ ಬೀಜಗಳ ಸೇವನೆ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಇದರಲ್ಲಿ ನಾರಿನಾಂಶವು ಹೆಚ್ಚಾಗಿರುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ, ಆ ಸಮಸ್ಯೆ ಎದುರಾಗದಂತೆ ತಡೆಯುತ್ತದೆ. ನಾವು ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ದೇಹದ ತೂಕವನ್ನು ಕಡಿಮೆ ಮಾಡಲು ಅತ್ಯುತ್ತಮ ಬೀಜಗಳಲ್ಲಿ ಒಂದಾಗಿದೆ.

ತಾಜಾ ಹಾಗೂ ಉತ್ತಮ ಗುಣಮಟ್ಟದ ಚಿಯಾ ಬೀಜಗಳು ಇಲ್ಲಿ ಸಿಗುತ್ತವೆ 👉🏻 Check Price 

ಇದು ಮೂಳೆಗಳನ್ನು ಬಲಪಡಿಸುವಲ್ಲಿ ಮತ್ತು ಹೃದಯವನ್ನು ಆರೋಗ್ಯಕರವಾಗಿಡುವಲ್ಲಿ ನೆರವಾಗುತ್ತೆ. ಆದರೆ, ಇಷ್ಟು ಪ್ರಯೋಜನಗಳ ನಂತರವೂ ಚಿಯಾ ಬೀಜಗಳಿಂದ ಕೆಲವು ಅಡ್ಡ ಪರಿಣಾಮಗಳು ಉಂಟಾಗಬಹುದು ಎನ್ನುವ ವಿಚಾರ ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ಇಲ್ಲದಿದ್ದರೆ ಚಿಯಾ ಬೀಜಗಳನ್ನು ದಿನಕ್ಕೆ 3-4 ಬಾರಿ ಸೇವಿಸಲು ಆರಂಭಿಸಿದರೆ ಅದರಿಂದ ಆರೋಗ್ಯದ ಮೇಲೆ ಎಂತಹ ಅಡ್ಡ ಪರಿಣಾಮ ಉಂಟಾಗಬಹುದು ಎನ್ನುವುದನ್ನು ಈಗ ತಿಳಿಯೋಣ ಬನ್ನಿ.

ಇದನ್ನೂ ಓದಿ: ಎಚ್ಚರ! ಈ ಲಕ್ಷಣಗಳು ದೇಹದಲ್ಲಿ ಕಂಡುಬಂದರೆ ನಿಮಗೆ ಥೈರಾಯ್ಡ್ ಆಗಿದೆ ಎಂದು ಅರ್ಥ

Side Effects of Chia Seeds In Kannada

ಮಧುಮೇಹ ಉಳ್ಳವರು ಚಿಯಾ ಬೀಜಗಳನ್ನು ಕಡಿಮೆ ತಿನ್ನಬೇಕು:

ಒಂದು ವೇಳೆ ನೀವು ಮಧುಮೇಹ ಸಮಸ್ಯೆಯಿಂದ ಬಳಲುತ್ತಲಿದ್ದರೆ ಚಿಯಾ ಬೀಜಗಳನ್ನು ಸ್ವಲ್ಪ ಕಡಿಮೆ ಸೇವಿಸಬೇಕು. ಚಿಯಾ ಬೀಜಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣವೇನೋ ಮಾಡುತ್ತವೆ, ಆದರೆ ನೀವು ಶುಗರ್ ಲೆವೆಲ್ ಅನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳುವಾಗ, ಈ ಬೀಜಗಳು ಅತಿಯಾದ ಉತ್ತೇಜನವನ್ನು ನೀಡುತ್ತವೆ.

ಚಿಯಾ ಬೀಜಗಳು ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯನ್ನು ಹೆಚ್ಚಿಸುತ್ತವೆ : ಇದರಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳ (fatty acid) ಕಾರಣದಿಂದಾಗಿ, ಇದು ರಕ್ತ ತೆಳುವಾಗುವುದನ್ನು ಕಡಿಮೆ ಮಾಡುತ್ತದೆ. ಆದ್ಧರಿಂದ ಇದು ರಕ್ತ ಹೆಪ್ಪುಗಟ್ಟುವಿಕೆಯ ರಚನೆಯ ಪ್ರಕ್ರಿಯೆಯಲ್ಲಿ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಉಂಟುಮಾಡಬಹುದು. ನೀವು ಗಾಯಗೊಂಡಾಗ ರಕ್ತ ಹರಿಯುತ್ತದೆ, ಆದರೆ ರಕ್ತ ಹೆಪ್ಪುಗಟ್ಟುವಿಕೆಯ ಪ್ರಕ್ರಿಯೆಯು ಸರಾಗವಾಗಿ ಕಾರ್ಯನಿರ್ವಹಿಸಿದಾಗ ಮಾತ್ರವೇ ರಕ್ತಸ್ರಾವವು ನಿಲ್ಲುತ್ತದೆ.

ಅಜೀರ್ಣದ ಸಮಸ್ಯೆ ಉಂಟಾಗಬಹುದು:

ಚಿಯಾ ಬೀಜಗಳಲ್ಲಿ ಫೈಬರ್ ಪ್ರಮಾಣವು ಹೆಚ್ಚಿರುವ ಕಾರಣದಿಂದಾಗಿ ಒಂದು ವೇಳೆ ನೀವು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಅದನ್ನು ಸೇವಿಸಿದಾಗ, ಅದು ಅಜೀರ್ಣಕ್ಕೆ ಕಾರಣವಾಗಬಹುದು. ಫೈಬರ್ ಅಂಶವು ಬೇಗ ಜೀರ್ಣವಾಗುವುದಿಲ್ಲ. ಈ ಸಂದರ್ಭದಲ್ಲಿ, ಇದು ಜೀರ್ಣಾಂಗ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ. ಹೆಚ್ಚು ಫೈಬರ್ ತಿನ್ನುವುದರಿಂದ ದೇಹದ ತೂಕ ಸಹಾ ಹೆಚ್ಚಾಗಬಹುದು. ಅಜೀರ್ಣ, ಭೇದಿ ಸಮಸ್ಯೆಯೂ ಇದರಿಂದ ಕಾಡಬಹುದು.

ಅಲರ್ಜಿಗಳಿಗೆ ಗುರಿಯಾಗುವ ಸಂಭವ:

ಹೆಚ್ಚು ಚಿಯಾ ಬೀಜಗಳನ್ನು ತಿನ್ನುವುದರಿಂದಾಗಿ, ಇದು ನಮ್ಮ ಆಹಾರದ ಅಲರ್ಜಿಯನ್ನು (Food Allergy) ಉಂಟುಮಾಡಬಹುದು. ಇದರಿಂದ ಹೊಟ್ಟೆ ನೋವು, ಭೇದಿ, ವಾಂತಿ ಮೊದಲಾದ ತೊಂದರೆಗಳು ಕಾಣಿಸಿಕೊಳ್ಳಬಹುದು. ಕೆಲವು ಜನರಿಗೆ ಮೈಮೇಲೆ ದದ್ದುಗಳು ಮೂಡಬಹುದು, ಚರ್ಮದಲ್ಲಿ ತುರಿಕೆ, ದೇಹದಲ್ಲಿ ಊತ ಮುಂತಾದ ಚರ್ಮದ ಅಲರ್ಜಿಗಳನ್ನು ಸಹಾ ಉಂಟಾಗಬಹುದು.

ತಾಜಾ ಹಾಗೂ ಉತ್ತಮ ಗುಣಮಟ್ಟದ ಚಿಯಾ ಬೀಜಗಳು ಇಲ್ಲಿ ಸಿಗುತ್ತವೆ 👉🏻 Check Price 

ಒಂದು ದಿನಕ್ಕೆ ಎಷ್ಟು ಚಿಯಾ ಬೀಜಗಳನ್ನು ಸೇವಿಸಬೇಕು?

ಚಿಯಾ ಬೀಜಗಳು ಫೈಬರ್ ಮತ್ತು ಪ್ರೋಟೀನ್‌ ನಿಂದ ತುಂಬಿದ್ದು, ಹೆಚ್ಚಿನ ಫೈಬರ್ ಸೇವನೆಯು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಆದ್ಧರಿಂದ ಒಂದು ದಿನದಲ್ಲಿ ನೀವು ಕೇವಲ ಎರಡರಿಂದ ಮೂರು ಟೀ ಚಮಚ ಚಿಯಾ ಬೀಜಗಳನ್ನು ಮಾತ್ರವೇ ಸೇವಿಸಬೇಕು. ಚಿಯಾ ಬೀಜಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಮತ್ತು ವೈದ್ಯರ ಸಲಹೆಯನ್ನು ಅನುಸರಿಸುವುದರಿಂದ ಹೆಚ್ಚು ಹಾನಿಯಾಗುವುದಿಲ್ಲ.

ನಾರಿನಂಶದ ಅತಿಯಾದ ಸೇವನೆಯೂ ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಚಿಯಾ ಬೀಜಗಳನ್ನು ಸೇವಿಸಲು ಬಯಸಿದರೆ ಅದರ ನೇರವಾದ ಬಳಕೆಯ ಬದಲಾಗಿ, ಅದನ್ನು ಸಲಾಡ್, ಸ್ಮೂಥಿ, ಜ್ಯೂಸ್, ಹಾಲು ಇತ್ಯಾದಿಗಳಿಗೆ ಸೇರಿಸಿ ಸೇವನೆ ಮಾಡಬಹುದು. ಚಿಯಾ ಬೀಜಗಳನ್ನು ರಾತ್ರಿಯ ಬದಲಿಗೆ ಹಗಲಿನ ವೇಳೆಯಲ್ಲಿ ಸೇವಿಸುವುದರಿಂದ ಅದು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ. ಏನೇ ಆದರೂ ಮೊದಲ ಬಾರಿಗೆ ಚಿಯಾ ಬೀಜಗಳನ್ನು ಸೇವನೆ ಮಾಡುವುದಾದರೆ ಆಗ ತಪ್ಪದೇ ಆಹಾರ ತಜ್ಞರ ಸಲಹೆಯನ್ನು ಪಡೆಯಿರಿ.

1 thought on “ಚಿಯಾ ಬೀಜ ಸೇವನೆ ಮಾಡುವಿರಾ? ಎಚ್ಚರ! ಸರಿಯಾದ ಸೇವನೆ ಕ್ರಮ ತಿಳಿದು ಉಪಯೋಗಿಸಿ | Chia Seeds In Kannada”

Leave a Comment