ಕಷ್ಟ ಪರಿಹಾರ ಮಂತ್ರ | ಕಷ್ಟ ಕಾಲದಲ್ಲಿ ಈ ಮಂತ್ರಗಳನ್ನು ಪಠಿಸಿದರೆ ಸಾಕು ನಿಮ್ಮೆಲ್ಲ ಕಷ್ಟಗಳು ದೂರ ಹೋಗುವವು!

KannadaVishwa
2 Min Read
ಕಷ್ಟ ಪರಿಹಾರ ಮಂತ್ರ

ನಮಸ್ಕಾರ ಫ್ರೆಂಡ್ಸ್ ನಾವು ಈ ಲೇಖನದಲ್ಲಿ ಕಷ್ಟ ಪರಿಹಾರ ಮಂತ್ರ ಹಾಗೂ ಸಂಕಷ್ಟ ಪರಿಹಾರ ಮಂತ್ರ ಗಳನ್ನು ತಿಳಿಸಿ ಕೊಟ್ಟಿದ್ದೇವೆ..  ಲೇಖನವನ್ನು ಪೂರ್ತಿ ಓದಿ.

ಆಂಜನೇಯ ಸ್ವಾಮಿಯನ್ನು ವಾಯುಪುತ್ರ, ಹನುಮಂತ ಎಂದು ಕರೆಯುತ್ತಾರೆ. ರಾಮನ ಪರಮಭಕ್ತನಾದ ಆಂಜನೇಯ ಸ್ವಾಮಿಯನ್ನು ಸ್ಮರಿಸಿದರೆ ಆ ವ್ಯಕ್ತಿಯ ಯಾವುದೇ ಕಷ್ಟ ಪರಿಹಾರ ಆಗದೆ ಇರುವುದಿಲ್ಲ. ನಿಮ್ಮ ಎಲ್ಲಾ ಕಷ್ಟಗಳನ್ನು ವಾಯುಪುತ್ರನ ಎದುರು ಹೇಳಿಕೊಂಡರೆ, ದೇವರ ಕೃಪೆ ಆಶೀರ್ವಾದ ನಿಮಗೆ ಖಂಡಿತವಾಗಿಯು ಸಿಗುತ್ತದೆ. ಅಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಇರುವುದು ಭಕ್ತಿಯ ಮಾರ್ಗ ಮಾತ್ರ. ವಾರದ 7 ದಿನಗಳಲ್ಲಿ ಮಂಗಳವಾರದ ದಿನವನ್ನು ಆಂಜನೇಯ ಸ್ವಾಮಿಗೆ ಅರ್ಪಿಸಲಾಗಿದೆ. ಈ ದಿನ ನೀವು ಆಂಜನೇಯ ಸ್ವಾಮಿಯ ದರ್ಶನ ಮಾಡಿ ಪ್ರಾರ್ಥನೆ ಮಾಡಿಕೊಂಡರೆ, ನಿಮ್ಮ ಜೀವನದ ಸಮಸ್ಯೆಗಳು, ಅಡೆತಡೆಗಳು ಎಲ್ಲಕ್ಕೂ ಶಾಶ್ವತ ಪರಿಹಾರ ಸಿಗುತ್ತದೆ.

ಕಷ್ಟ ಪರಿಹಾರ ಮಂತ್ರ
ಕಷ್ಟ ಪರಿಹಾರ ಮಂತ್ರ

ಆಂಜನೇಯ ಸ್ವಾಮಿಯ ಆಶೀರ್ವಾದ ಪಡೆಯಲು ಮಂಗಳವಾರದ ದಿನ ನೀವು ಕೆಲವು ಮಂತ್ರಗಳನ್ನು ಪಠಣೆ ಮಾಡಬೇಕು, ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತದೆ. ವಾಯಿಪುತ್ರನನ್ನು ಒಲಿಸಿಕೊಳ್ಳುವ ಆ ಮಂತ್ರಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ನಿಮ್ಮ ಬದುಕಿನಲ್ಲಿರುವ ಎಲ್ಲಾ ರೀತಿಯ ತೊಂದರಗಳಿಂದ ಮುಕ್ತಿ ಪಡೆಯಲು ಈ ಮಂತ್ರವನ್ನು ಮಂಗಳವಾರ ಪಠಿಸಬೇಕು..

ಕಷ್ಟ ಪರಿಹಾರ ಮಂತ್ರ

“ಓಂ ತೇಜಸೇ ನಮಃ
ಓಂ ಶೂರಾಯ ನಮಃ
ಓಂ ಶಾಂತಾಯ ನಮಃ
ಓಂ ಮರುತಾತ್ಮಜಾಯ ನಮಃ
ಓಂ ಹುಂ ಹನುಮಾನ್ತೇ ನಮಃ”

ಇದನ್ನೂ ಓದಿ:  ಶ್ರೀ ಹನುಮಾನ ಚಾಲಿಸಾ ಮತ್ತು ಅದರಿಂದಾಗುವ ಪ್ರಯೋಜನ ತಿಳಿದುಕೊಳ್ಳಿ

2. ಒಂದು ವೇಳೆ ನಿಮ್ಮ ಜೀವನದಲ್ಲಿ ನೆಗಟಿವ್ ಎನರ್ಜಿಯಿಂದ ಏನಾದರು ತೊಂದರೆಗಳು ಸಂಭವಿಸುತ್ತಿವೆ ಎನ್ನುವುದಾದರೆ, ಮಂಗಳವಾರದ ದಿನ 11 ಸಾರಿ ಈ ಮಂತ್ರವನ್ನು ಜಪಿಸಿ, ಹೀಗೆ ಮಾಡಿದರೆ ಅಂತಹ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತದೆ.

“ನರಸಿಂಹಾಯ.. ಓಂ ಹಾಂ ಹೀಮ್ ಹುಂ ಹೋ ಹಂ ಸಕಲಭೀತಪ್ರೇತದಮನಾಯ ಸ್ವಾಹ”

3. ಮಂಗಳವಾರ ಅಥವಾ ಶನಿವಾರದ ದಿನ, ಈ ಕೆಳಗೆ ಸೂಚಿಸಿರುವ ಮಂತ್ರವನ್ನು ಪಠಿಸುವುದರಿಂದ, ನಿಮ್ಮ ಶತ್ರುಗಳ ಮೇಲೆ ಗೆಲುವು ಸಾಧಿಸುತ್ತೀರಿ..

“ಓಂ ಪೂರ್ವಕಪಿಮುಖಾಯ ಪಚ್ಚಮುಖ ಹನುಮಾನ್ ಟಂ ಟಂ ಟಂ ಟಂ ಟಂ ಸಕಲ ಶತ್ರು ಸಂಹರಣಾಯ ಸ್ವಾಹಾ”

ಸಂಕಷ್ಟ ಪರಿಹಾರ ಮಂತ್ರ

4. ಒಂದು ವೇಳೆ ನಿಮ್ಮ ಉದ್ಯೋಗದಲ್ಲಿ ಏನಾದರೂ ಅಡಚಣೆ ಆಗುತ್ತಿದ್ದರೆ, ಆ ಸಮಸ್ಯೆ ದೂರವಾಗಿ ಕೆಲಸದಲ್ಲಿ ಯಶಸ್ಸು ಪಡೆಯಲು, ಮಂಗಳವಾರ ದಿವಸ ಆಂಜನೇಯ ಸ್ವಾಮಿಗೆ ಬೂಂದಿ ಲಡ್ಡು ಅರ್ಪಿಸಿ, ಹಾಗೆಯೇ ಆಂಜನೇಯ ಸ್ವಾಮಿ ವಿಗ್ರಹದ ಎದುರು ಕುಳಿತು ಈ ಮಂತ್ರವನ್ನು ಪಠಿಸಿ..

“ಓಂ ಪಿಂಗಾಕ್ಷಾಯ ನಮಃ”

5. ನಿಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಆಗಬಾರದು, ಯಾವುದೇ ರೋಗಗಳು ನಿಮಗೆ ತೊಂದರೆ ಕೊಡಬಾರದು, ದುಃಖಗಳು ಬರಬಾರದು ಎನ್ನುವುದಾದರೆ, ಆಂಜನೇಯ ಸ್ವಾಮಿಯ ಎದುರು ಈ ಮಂತ್ರವನ್ನು ಪಠಿಸಿ..

“ಓಂ ಹುಂ ಹನುಮತೆ ನಮಃ | ಯಾ ಮರ್ಕಟೇಶ್ ಮಹೋತ್ಸಾಹ ಸರ್ವಶೋಕ್ ವಿನಾಶನ್ |
ಮೇಲೆ ತಿಳಿಸಿರುವ ಮಂತ್ರಗಳನ್ನು ಪಠಿಸುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.

ಈ ಲೇಖನದಲ್ಲಿ ನಾವು ಕಷ್ಟ ಪರಿಹಾರ ಮಂತ್ರ ಹಾಗೂ ಸಂಕಷ್ಟ ಪರಿಹಾರ ಮಂತ್ರ ಗಳ ಬಗ್ಗೆ ತಿಳಿಸಿ ಕೊಟ್ಟಿದ್ದೇವೆ.. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.

Share This Article
Leave a comment