ಅಗಸೆ ಬೀಜ ಸೇವಿಸುವುದರಿಂದ ಸಿಗುವ ಲಾಭಗಳು, ಔಷಧಿ ಗುಣಗಳಿಂದ ತುಂಬಿದ ಖಜಾನೆ ಇದು! : flax seeds in kannada

ಭಾರತದಲ್ಲಿ ಇಂದು ನಿನ್ನೆಯಲ್ಲ, ಬದಲಿಗೆ ಸಾವಿರಾರು ವರ್ಷಗಳಿಂದ ಅಗಸೆ ಬೀಜವನ್ನು ಆಯುರ್ವೇದ ಔಷಧದಲ್ಲಿ ಬಳಸಲಾಗುತ್ತಿದೆ. ಅಗಸೆ ಬೀಜಗಳನ್ನು ಇಂಗ್ಲೀಶ್ ನಲ್ಲಿ Flax Seeds ಎಂದು ಕರೆಯುತ್ತಾರೆ.  ಅಗಸೆ ಬೀಜವು ಬೀಜ, ಎಣ್ಣೆ, ಪುಡಿ, ಮಾತ್ರೆಗಳು, ಕ್ಯಾಪ್ಸುಲ್ ಗಳು ಮತ್ತು ಹಿಟ್ಟಿನ ರೂಪದಲ್ಲಿ ಲಭ್ಯವಿದೆ. ಇದನ್ನು ಮಲಬದ್ಧತೆ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಹೃದ್ರೋಗ, ಕ್ಯಾನ್ಸರ್ ಮತ್ತು ಇತರ ಅನೇಕ ರೋಗಗಳನ್ನು ತಡೆಗಟ್ಟುವುದಕ್ಕಾಗಿ ಜನರು ತಮ್ಮ ಆಹಾರದಲ್ಲಿ ಬಳಸುತ್ತಾರೆ. ನಾವು ಅಗಸೆ ಬೀಜದಲ್ಲಿರುವ ಪೋಷಕಾಂಶಗಳ ಬಗ್ಗೆ ಹೇಳುವುದಾದರೆ, ಇದು ಲಿಗ್ನಾನ್ಸ್, ಉತ್ಕರ್ಷಣ ನಿರೋಧಕಗಳು, ಫೈಬರ್, ಪ್ರೋಟೀನ್ ಮತ್ತು ಆಲ್ಫಾ ಲಿನೋಲೆನಿಕ್ ಆಮ್ಲ (ALA) ಅಥವಾ ಒಮೆಗಾ -3 ನಂತಹ ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳಂತಹ ಅಂಶಗಳ ಭಂಡಾರವಾಗಿದೆ.

flax seeds in kannada

ಈ ಪೋಷಕಾಂಶಗಳ ಸೇವನೆಯಿಂದಾಗಿ ವಿವಿಧ ರೋಗಗಳ ಅಪಾಯವನ್ನು ಕಡಿಮೆ ಮಾಡಲು ನಮಗೆ ಸಾಕಷ್ಟು ನೆರವು ಸಿಗುತ್ತದೆ. ಆಯುರ್ವೇದ ವೈದ್ಯೆ ಆಗಿರುವ ದೀಕ್ಷಾ ಭಾವಸರ್ ಅವರು ನಿಮ್ಮ ಆಹಾರದಲ್ಲಿ ಅಗಸೆ ಬೀಜವನ್ನು ಸೇರಿಸಿಕೊಳ್ಳುವುದರಿಂದ ದೊರೆಯುವ ಆರೋಗ್ಯ ಪ್ರಯೋಜನಗಳೇನು ಎನ್ನುವುದನ್ನು ಸವಿವರವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಚಿಯಾ ಬೀಜ ಸೇವನೆ ಮಾಡುವಿರಾ? ಎಚ್ಚರ! ಸರಿಯಾದ ಸೇವನೆ ಕ್ರಮ ತಿಳಿದು ಉಪಯೋಗಿಸಿ

ಅಗಸೇ ಬೀಜದ ಆಯುರ್ವೇದಿಯ ಗುಣಗಳು:

ಇದು ರುಚಿಯಲ್ಲಿ ಸಿಹಿ ಮತ್ತು ಕಹಿ, ಲೋಳೆ (ಸ್ನಿಗ್ಧ) ಮತ್ತು ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟವಾಗಿರುತ್ತದೆ, ಇದೇ ಶಕ್ತಿಯಲ್ಲಿ ಅದು ಬಿಸಿಯಾಗಿರುತ್ತದೆ, ಆದ್ದರಿಂದ ನರ ಶೂಲೆ, ಪಾರ್ಶ್ವವಾಯು, ಸಂಧಿವಾತದಂತಹ ವಾತ ಅಸ್ವಸ್ಥತೆಗಳಿಗೆ ಇದು ಬಹಳ ಉಪಯುಕ್ತವಾಗಿದೆ. ಇದು ವಾತವನ್ನು ಸಮತೋಲನಗೊಳಿಸುತ್ತದೆ. ಆದರೆ ಇದು ಪಿತ್ತ ಮತ್ತು ಕಫವನ್ನು ಉಲ್ಬಣಗೊಳಿಸುತ್ತದೆ ಆದ ಕಾರಣ ಅತಿಯಾದ ರಕ್ತಸ್ರಾವದಂತಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತು ಗರ್ಭ ಧರಿಸಲು ಯೋಜನೆ‌ ಮಾಡಿರುವವರ ಇದನ್ನು ಆದಷ್ಟು ಎಚ್ಚರಿಕೆಯಿಂದ ಬಳಸಬೇಕಾಗಿರುತ್ತದೆ.

ಉತ್ತಮ ಗುಣಮಟ್ಟದ ಹಾಗೂ ತಾಜಾ ಅಗಸೆ ಬೀಜಗಳು ಇಲ್ಲಿ ಸಿಗುತ್ತವೆ 👉🏻 Check Price 

ಬ್ಲಡ್ ಶುಗರ್ ಲೆವಲ್ ನಿಯಂತ್ರಣದಲ್ಲಿ ಇಡಲು ನೆರವು:

ಮಧುಮೇಹ ಸಮಸ್ಯೆ ಇರುವವರಿಗೆ, ಅವರ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಅಗಸೆ ಬೀಜಗಳು ಸಹಾಯಕವಾಗಿವೆ. ಇದರಲ್ಲಿರುವ ಕರಗುವ ಫೈಬರ್ ನಿಮ್ಮ ಹಸಿವನ್ನು ದೂರವಿಡಲು ಸಹಾಯ ಮಾಡುತ್ತದೆ, ಆದ್ದರಿಂದ ದೇಹದ ತೂಕ ಕಡಿಮೆ ಮಾಡಲು ಬಯಸುತ್ತಿರುವವರಿಗೆ ಕೂಡಾ ಇದು ಬಹಳ ಉತ್ತಮವಾಗಿದೆ.

ಮಲಬದ್ಧತೆ ನಿವಾರಣೆಗೆ ಬಹಳ ಉಪಯುಕ್ತ:

ಅಗಸೆ ಬೀಜಗಳು ಫೈಬರ್ ನಲ್ಲಿ ಸಮೃದ್ಧವಾಗಿವೆ ಮತ್ತು ಈ ಕಾರಣದಿಂದಾಗಿ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ತೊಡೆದುಹಾಕಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕೆಟ್ಟ ಕೊಲೆಸ್ಟರಾಲ್ ಕಡಿಮೆ ಮಾಡುತ್ತೆ:

ಅಗಸೆ ಬೀಜಗಳು LDL (ಕೆಟ್ಟ ಕೊಲೆಸ್ಟ್ರಾಲ್) ಅನ್ನು ಕಡಿಮೆ ಮಾಡುತ್ತದೆ ಮತ್ತು HDL (ಉತ್ತಮ ಕೊಲೆಸ್ಟ್ರಾಲ್) ಅನ್ನು ಸುಧಾರಿಸುತ್ತದೆ, ಇದರಿಂದಾಗಿ ನೀವು ರಕ್ತದ ಕೊಲೆಸ್ಟರಾಲ್ ಮಟ್ಟವನ್ನು ನಿರ್ವಹಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ.

ಬ್ಲಡ್ ಪ್ರೆಶರ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ:

ಅಗಸೆ ಬೀಜಗಳು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವಾಗಿದ್ದು ಮತ್ತು ಆ್ಯಂಟಿ ಏಜಿಂಗ್ ಗುಣಗಳನ್ನು ಸಹಾ ಇದು ಹೊಂದಿದೆ. ಅಲ್ಲದೇ ಇದು ಚರ್ಮ ಮತ್ತು ಕೂದಲಿಗೆ ಒಳ್ಳೆಯದು.

ಪ್ರೋಟೀನ್ ನ ಭಂಡಾರವಾಗಿದೆ :

ನೀವು ಮಾಂಸ ಮತ್ತು ಮೀನುಗಳನ್ನು ತಿನ್ನುವುದಿಲ್ಲ ಎನ್ನುವುದಾದರೆ, ಅಗಸೆ ಬೀಜಗಳು ನಿಮಗೆ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದನ್ನು ಸಸ್ಯ ಆಧಾರಿತ ಪ್ರೋಟೀನ್ ಎಂದು ಪರಿಗಣಿಸಲಾಗುತ್ತದೆ, ಇದು ಸಸ್ಯಾಹಾರಿಗಳಿಗೆ ಉತ್ತಮ ಆಯ್ಕೆಯಾಗಿದೆ.

ಉತ್ತಮ ಗುಣಮಟ್ಟದ ಹಾಗೂ ತಾಜಾ ಅಗಸೆ ಬೀಜಗಳು ಇಲ್ಲಿ ಸಿಗುತ್ತವೆ 👉🏻 Check Price 

ಕ್ಯಾನ್ಸರ್ ರೋಗ ತಡೆಯಲು ನೆರವಾಗುತ್ತದೆ:

ಅಗಸೆಬೀಜಗಳು ತಮ್ಮಲ್ಲಿ ಪ್ರಬಲವಾದ ಉತ್ಕರ್ಷಣ ನಿರೋಧಕ ಮತ್ತು ಈಸ್ಟ್ರೊಜೆನಿಕ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಇವು ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಹಾಗೂ ಇನ್ನಿತರೆ ರೀತಿಯ ಕ್ಯಾನ್ಸರ್ ಅನ್ನು ತಡೆಯಲು ನೆರವನ್ನು ನೀಡುತ್ತದ

FAQ:

Flax Seeds in Kannada name or meaning?

ಅಗಸೆ ಬೀಜ.

ಅಗಸೆ ಬೀಜಗಳಿಗೆ ಇಂಗ್ಲೀಶ್ ನಲ್ಲಿ  ಏನೆಂದು ಕರೆಯುತ್ತಾರೆ?

Flax Seeds ಎಂದು ಕರೆಯುತ್ತಾರೆ.

ಈ ಲೇಖನದಲ್ಲಿ ಅಗಸೆ ಬೀಜದ ಕುರಿತು ಅದರ ಮಹತ್ವದ ಕುರಿತಾಗಿ ಹೇಳಲಾಗಿದೆ. ಆದರೆ ಇದು ಯಾವುದೇ ರೀತಿಯಲ್ಲಿ ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿರಲು ಸಾಧ್ಯವಿಲ್ಲ ಎನ್ನುವುದು ನೆನಪಿರಲಿ ಹಾಗೂ ಇದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

Leave a Comment