ಸಾವಯವ ಕೃಷಿ ಪ್ರಬಂಧ ಕನ್ನಡದಲ್ಲಿ | Organic Agriculture Essay in Kannada

KannadaVishwa
2 Min Read

ಸಾವಯವ ಕೃಷಿಯನ್ನು ಹಿಂದಿ ಭಾಷೆಯಲ್ಲಿ ಜೈವಿಕ್ ಖೇತಿ ಎಂದು, ಇಂಗ್ಲೀಷ್ ನಲ್ಲಿ  Organic farming ಎಂದು ಕರೆಯಲಾಗುತ್ತದೆ. ಭಾರತೀಯ ಪ್ರದೇಶಗಳಲ್ಲಿ ಸಾವಯವ ಕೃಷಿಗೆ ವಿಶೇಷ ಪ್ರಾಮುಖ್ಯತೆ ಇದೆ. ಆದ್ದರಿಂದ ಇಂದು ನಾವು ನಮ್ಮ ಲೇಖನದ ಮೂಲಕ ಸಾವಯವ ಕೃಷಿ ಪ್ರಬಂಧ ಕನ್ನಡದಲ್ಲಿ (Organic Agriculture Essay in Kannada) ಪ್ರಸ್ತುತಪಡಿಸಲಿದ್ದೇವೆ. ಬನ್ನಿ ಸಾವಯವ ಕೃಷಿ ವಿಷಯದ ಕುರಿತು ತಿಳಯೋಣ.

ಸಾವಯವ ಕೃಷಿ ಪ್ರಬಂಧ ಕನ್ನಡದಲ್ಲಿ

ಪೀಠಿಕೆ: 

ಭಾರತ ಕೃಷಿ ಪ್ರಧಾನ ದೇಶ, ಹೆಚ್ಚಿನ ಜನಸಂಖ್ಯೆಯು ಕೃಷಿಯಿಂದ ತಮ್ಮ ಜೀವನೋಪಾಯವನ್ನು ನಡೆಸುತ್ತಿದೆ. ಭಾರತ ದೇಶದಲ್ಲಿ ಮಾಡಿದ ಹಸಿರು ಕ್ರಾಂತಿಯು ಕೃಷಿ ಕ್ಷೇತ್ರದ ಪ್ರಗತಿಗಾಗಿ ಪ್ರಾರಂಭವಾದ ಅಭಿಯಾನವಾಗಿದೆ. ಆದರೆ ಇಂದಿಗೂ ಸಹ ಸಾಂಪ್ರದಾಯಿಕ ಕೃಷಿಯನ್ನು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಮಾಡಲಾಗುತ್ತದೆ, ಇದನ್ನು ಸಾವಯವ ಕೃಷಿ ಎಂದು ಕರೆಯಲಾಗುತ್ತದೆ.

ಸಾವಯವ ಕೃಷಿ :

ಸಾವಯವ ಕೃಷಿಯ ಪ್ರಯೋಜನಗಳು ಬಹಳಷ್ಟಿವೆ, ಇದರ ನೇರ ಮತ್ತು ಪರೋಕ್ಷ ಲಾಭವನ್ನು ರೈತರು ಪಡೆಯುತ್ತಾರೆ. ರೈತನ ಆರೋಗ್ಯ ಮತ್ತು ಪರಿಸರದ ಜೊತೆಗೆ ರೈತನ ಭೂಮಿಯ ಆರೋಗ್ಯವೂ ಇದರಿಂದ ಸುಧಾರಿಸುತ್ತದೆ. ಸಾವಯವ ಕೃಷಿ ಮಾಡುವುದರಿಂದ ರೈತರು ಖರ್ಚು ಕಡಿಮೆ ಹಾಗೂ ಅಧಿಕ ಆರ್ಥಿಕ ಲಾಭವನ್ನೂ ಪಡೆಯುತ್ತಾರೆ. ಇಂದಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬೆಲೆ ಸಾಕಷ್ಟು ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಈ ರಾಸಾಯನಿಕ ಕೃಷಿ ಮಾಡಲು ಹೆಚ್ಚು ಸಾಲ ಮಾಡುತ್ತಾರೆ. ಆದರೆ ರಾಸಾಯನಿಕ ಗೊಬ್ಬರಗಳ ಬದಲಿಗೆ, ಸಸ್ಯ ಮತ್ತು ಜೀವಿಗಳ ಅವಶೇಷಗಳಿಂದ ತಯಾರಿಸಿದ ಸಾವಯವ ಗೊಬ್ಬರಗಳನ್ನು ಕೃಷಿಯಲ್ಲಿ ಬಳಸಿದಾಗ ಜಮೀನಿನ ಫಲವತ್ತತೆ ಹೆಚ್ಚುತ್ತದೆ.

ಸಾವಯವ ಕೃಷಿಯ ಪ್ರಯೋಜನಗಳು:

  1. ಸಾವಯವ ಕೃಷಿಯಿಂದ ಉತ್ಪತ್ತಿಯಾಗುವ ರಸಗೊಬ್ಬರಗಳು ಸಾಕಷ್ಟು ಪೋಷಕಾಂಶಗಳಿಂದ ತುಂಬಿರುತ್ತವೆ.
  2. ಸಾವಯವ ಕೃಷಿಯು ಅತ್ಯಂತ ಸರಳವಾದ ಪ್ರಕ್ರಿಯೆಯಾಗಿದೆ, ಏಕೆಂದರೆ ಇದು ರಾಸಾಯನಿಕ ಗೊಬ್ಬರಗಳು, ಹೈಬ್ರಿಡ್ ಬೀಜಗಳು ಇತ್ಯಾದಿಗಳ ವೆಚ್ಚವನ್ನು ಒಳಗೊಂಡಿರುವುದಿಲ್ಲ.
  3. ಸಾವಯವ ಕೃಷಿಯು ಪರಿಸರ ಸ್ನೇಹಿಯಾಗಿದೆ, ಇದು ಪರಿಸರಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.
  4. ಸಾವಯವ ಕೃಷಿಯಲ್ಲಿ ರೋಗ ರುಜಿನ ಕಮ್ಮಿ, ಹೀಗಾಗಿ ಖರ್ಚೂ ಕಡಿಮೆ ಮತ್ತು ಹೆಚ್ಚಿನ ಉತ್ಪಾದನೆಯಿಂದಾಗಿ ರೈತರಿಗೆ ಅಧಿಕ ಲಾಭವಾಗುತ್ತದೆ.
  5. ಸಾವಯವದಲ್ಲಿ ಬೆಳೆದ ಆಹಾರ ಧಾನ್ಯಗಳಿಗೆ ವಿದೇಶದಲ್ಲಿ ಬೇಡಿಕೆಯಿರುವ ಕಾರಣ ರೈತರು ರಫ್ತು ಮಾಡಿ ಹೆಚ್ಚಿನ ಆದಾಯ ಪಡೆಯಬಹುದು.

ಸಾವಯವ ಕೃಷಿ ಯೋಜನೆ :

ಸಾವಯವ ಕೃಷಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ವಿವಿಧ ರೀತಿಯ ಸಾವಯವ ಕೃಷಿ ಯೋಜನೆಗಳನ್ನು ಪ್ರಾರಂಭಿಸಿದೆ. ಆ ಮೂಲಕ ರೈತರಿಗೂ ಹೆಚ್ಚಿನ ಉತ್ಸಾಹ ಬಂದಿದೆ. ಹತ್ತಿರದ ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಸಾವಯವ ಕೃಷಿ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಅವುಗಳನ್ನು ಬೆಳೆಸಿಕೊಂಡು ಸಾವಯವ ಕೃಷಿಯನ್ನು ವ್ಯಾಪಕವಾಗಿ ಮಾಡಬಹುದು.

ಉಪಸಂಹಾರ:

ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮಾನವರು ಭೂಮಿಯ ಮೇಲೆ ತಮ್ಮ ಅಸ್ತಿತ್ವವನ್ನು ದೀರ್ಘಕಾಲ ಉಳಿಸಿಕೊಳ್ಳಬೇಕಾದರೆ ಸಾವಯವ ಕೃಷಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದರೆ ಅತಿಶಯೋಕ್ತಿಯಾಗಲಾರದು. ಆಧುನಿಕ ಕಾಲದಲ್ಲಿ ಕೃಷಿಯಲ್ಲಿನ ರಾಸಾಯನಿಕ ಪ್ರಯೋಗಗಳು ಮನುಷ್ಯರಿಗೆ ಮಾತ್ರವಲ್ಲದೆ ಪ್ರಕೃತಿಗೂ ಸಾಕಷ್ಟು ಹಾನಿ ಮಾಡಿದೆ. ಆರೋಗ್ಯ ಮತ್ತು ಪರಿಸರದ ಮೇಲೆ ಪರಿಣಾಮ ಬೀರುವ ಕೃಷಿಯನ್ನು ಬಿಟ್ಟು ಆರೋಗ್ಯಕರ ಮತ್ತು ಪರಿಸರ ಸ್ನೇಹಿ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದು ನಮ್ಮ ಇಂದಿನ ಅವಶ್ಯಕತೆಯಾಗಿದೆ.

Share This Article
Leave a comment